ಬಿ. ವಿ. ಕಕ್ಕಿಲಾಯ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ರಾಜಕಾರಣಿಯಾಗಿದ್ದರು. == ಹಿನ್ನಲೆ == ಕಕ್ಕಿಲಾಯ ಕಾಸರಗೋಡಿನಲ್ಲಿ 1919ರ ಏಪ್ರಿಲ್ 11ರಂದು ಜನಿಸಿದರು ತಂದೆ ವಿಷ್ಣು ಕಕ್ಕಿಲ್ಲಾಯ ಮತ್ತು ಗಂಗಮ್ಮ . ಕಾಸರಗೋಡಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ , 1937ರಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ರಸಾಯನಶಾಸ್ತ್ರದಲ್ಲಿ ಪದವಿ ಶಿಕ್ಷಣ ಪಡೆದರು. == ರಾಜಕೀಯ == ಬ್ರಿಟಿಷರ ವಿರುದ್ಧ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ಕಮ್ಯುನಿಸ್ಟ್ ಸಿದ್ಧಾಂತದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ ಸೇರಿದರು 1942ರಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರನ್ನು ಬಂಧಿಸಲಾಗಿತ್ತು. ಮದ್ರಾಸ್ ಅಸೆಂಬ್ಲಿಯಿಂದ ಸಿಪಿಐ ಪಕ್ಷ ಕಕ್ಕಿಲ್ಲಾ ಅವರನ್ನು ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಮಾಡಿತ್ತು. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಕಕ್ಕಿಲಾಯ ಸಕ್ರಿಯರಾಗಿದ್ದರು 1972ರಲ್ಲಿ ವಿಧಾನಸಭೆಗೆ ಬಂಟ್ವಾಳದಿಂದ ಆಯ್ಕೆ 1978ರಲ್ಲಿ ವಿಧಾನಸಭೆಗೆ ವಿಟ್ಲದಿಂದ ಆಯ್ಕೆ ಡಿ ದೇವರಾಜ್ ಅರಸ್ ಅಧಿಕಾರ ಅವಧಿಯಲ್ಲಿ ಭೂಸುಧಾರಣೆ ಕಾಯಿದೆ ಸಮಿತಿಯ ಸದಸ್ಯರಾಗಿದ್ದರು == ಬರವಣಿಗೆ == ಅವರ ಆತ್ಮ ಚರಿತ್ರೆ ‘ಬರೆಯದ ದಿನಚರಿಯ ಮರೆಯದ ಪುಟಗಳು ಕಾರ್ಲ್‌ಮಾರ್ಕ್ಸ್ ಬದುಕು ಬರಹ ಕಮ್ಯುನಿಸಂ ಇರವು ಮತ್ತು ಅರಿವು ಬರೆಯದ ದಿನಚರಿಯ ಮರೆಯದ ಪುಟಗಳು ಫ್ರೆಡರಿಕ್ ಏಂಜಲ್ಸ್ == ಪ್ರಶಸ್ತಿ == ಕರ್ನಾಟಕ ಸುವರ್ಣ ಏಕೀಕರಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನೀರ್ಪಾಜೆ ಭೀಮ ಭಟ್ ಪ್ರಶಸ್ತಿ, ಕರ್ನಾಟಕ ತುಳು ಅಕಾಡೆಮಿ ಪ್ರಶಸ್ತಿ == ಉಲ್ಲೇಖಗಳು ==